ಪ್ರೊ ಕಬಡ್ಡಿ ಲೀಗ್‌ 11ನೇ ಆವೃತ್ತಿಯ ಆಟಗಾರರ ಹರಾಜು ಸ್ವಾತಂತ್ರ್ಯ ದಿನಾಚರಣೆಯಂದು ನಡೆಯಲಿದೆ

ಪ್ರೊ ಕಬಡ್ಡಿ ಲೀಗ್‌ 11ನೇ ಆವೃತ್ತಿಯ ಆಟಗಾರರ ಹರಾಜು ಸ್ವಾತಂತ್ರ್ಯ ದಿನಾಚರಣೆಯಂದು ನಡೆಯಲಿದೆ

ಮಶಾಲ್‌ ಸ್ಪೋರ್ಟ್ಸ್ ಆಗಸ್ಟ್‌ 15 ಮತ್ತು 16ರಂದು ಮುಂಬೈನಲ್ಲಿಸೀಸನ್‌ 11 ಆಟಗಾರರ ಹರಾಜು ನಡೆಸಲಿದೆ

ಮುಂಬೈ, ಜುಲೈ 25: ಪ್ರೊ ಕಬಡ್ಡಿ ಲೀಗ್‌ (ಪಿಕೆಎಲ್‌) 2024ರ ಜುಲೈ 26ರಂದು ತನ್ನ 10ನೇ ವಾರ್ಷಿಕೋತ್ಸವವನ್ನು ಸಮೀಪಿಸುತ್ತಿರುವಾಗ, ಮಶಾಲ್‌ ಸ್ಪೋರ್ಟ್ಸ್ 2024ರ ಆಗಸ್ಟ… 15 ಮತ್ತು 16ರಂದು ಮುಂಬೈನಲ್ಲಿ ನಿಗದಿಯಾಗಿರುವ ಬಹುನಿರೀಕ್ಷಿತ ಪಿಕೆಎಲ್‌ 11ನೇ ಆವೃತ್ತಿಯ ಆಟಗಾರರ ಹರಾಜನ್ನು ಘೋಷಿಸಲು ರೋಮಾಂಚನಗೊಂಡಿದೆ. ಒಂದು ದಶಕದ ಹಿಂದೆ ಮುಂಬೈನಲ್ಲಿಯು ಮುಂಬಾ ಮತ್ತು ಜೈಪುರ ಪಿಂಕ್‌ ಪ್ಯಾಂಥರ್ಸ್‌ ನಡುವಿನ ಪಂದ್ಯದೊಂದಿಗೆ ಲೀಗ್‌ನ ಪ್ರಯಾಣ ಪ್ರಾರಂಭವಾಯಿತು. 2023ರ ಡಿಸೆಂಬರ್‌ 2ರಿಂದ 2024ರ ಮಾರ್ಚ್‌ 1ರವರೆಗೆ ಪ್ರೊ ಕಬಡ್ಡಿ ಲೀಗ್‌ನ ಹತ್ತನೇ ಋುತುವನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿದ ನಂತರ, ಲೀಗ್‌ 10 ಋುತುಗಳನ್ನು ಪೂರ್ಣಗೊಳಿಸಿದ ಭಾರತದ ಎರಡನೇ ಕ್ರೀಡಾ ಲೀಗ್‌ ಆಗಿದೆ.

ಇದಲ್ಲದೆ, ಮಶಾಲ್‌ ಸ್ಪೋರ್ಟ್ಸ್ ಪ್ರೊ ಕಬಡ್ಡಿ ಲೀಗ್‌ ಸೀಸನ್‌ 11ಕ್ಕೆ ಮುಂಚಿತವಾಗಿ ಹೊಸ ಲೋಗೋ(ಲಾಂಛನ)ವನ್ನು ಬಹಿರಂಗಪಡಿಸಿದೆ. ಲಾಂಛನವು ಭಾರತೀಯ ತ್ರಿವರ್ಣ ಧ್ವಜವನ್ನು ಹೋಲುವ ಕೇಸರಿ ಮತ್ತು ಹಸಿರು ಬಣ್ಣಗಳನ್ನು ಪ್ರದರ್ಶಿಸುತ್ತದೆ, ಕಬಡ್ಡಿ ಆಟವನ್ನು ದೇಶದ ಹೆಮ್ಮೆಯ ಕ್ರೀಡೆ ಎಂದು ಚಿತ್ರಿಸುತ್ತದೆ.

Advertisement

ಪ್ರೊ ಕಬಡ್ಡಿ ಲೀಗ್‌ ಆಯುಕ್ತ ಅನುಪಮ್‌ ಗೋಸ್ವಾಮಿ ಮಾತನಾಡಿ, ‘‘ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯಂದು ಪ್ರೊ ಕಬಡ್ಡಿ ಸೀಸನ್‌ ಇಲೆವೆನ್‌ ಆಟಗಾರರ ಹರಾಜು ನಡೆಯಲಿದೆ ಎಂದು ಘೋಷಿಸಲು ನಮಗೆ ಸಂತೋಷವಾಗಿದೆ. ಹಲವಾರು ಸಹಸ್ರಮಾನಗಳಿಂದ ಭಾರತದ ವಿಶಿಷ್ಟ ಮತ್ತು ಜನಪ್ರಿಯ ಕ್ರೀಡೆಯಾಗಿರುವ ಕಬಡ್ಡಿಯನ್ನು ಪ್ರೊ ಕಬಡ್ಡಿಯಲ್ಲಿವಿಶ್ವದರ್ಜೆಯ ಸ್ಪರ್ಧಾತ್ಮಕ ವಿಭಾಗವಾಗಿ ಬಲವಾಗಿ ಪ್ರದರ್ಶಿಸಲಾಗಿದೆ. ಎಕೆಎಫ್‌ಐನ ಉಸ್ತುವಾರಿಯಲ್ಲಿಪ್ರೊ ಕಬಡ್ಡಿಯ ಎಲ್ಲಾ ಪಾಲುದಾರರಿಗೆ ಮತ್ತು ದೇಶದ ಕಬಡ್ಡಿ ಪರಿಸರ ವ್ಯವಸ್ಥೆಗೆ ಇದು ದೊಡ್ಡ ಸಾಧನೆಯಾಗಿದೆ. 11ನೇ ಆವೃತ್ತಿಯ ಆಟಗಾರರ ಹರಾಜಿನಲ್ಲಿನಾವು ಈ ಸಾಧನೆಯನ್ನು ದೇಶಭಕ್ತಿಯ ಉತ್ಸಾಹದಿಂದ ಬಲವಾಗಿ ಆಚರಿಸುತ್ತೇವೆ,’’ ಎಂದರು.

ಮಶಾಲ್‌ ಸ್ಪೋರ್ಟ್ಸ್ ಮತ್ತು ಡಿಸ್ನಿ ಸ್ಟಾರ್‌, ಅಮೆಚೂರ್‌ ಕಬಡ್ಡಿ ಫೆಡರೇಶನ್‌ ಆಫ್‌ ಇಂಡಿಯಾ (ಎಕೆಎಫ್‌ಐ) ಆಶ್ರಯದಲ್ಲಿಮತ್ತು ಅನುಮೋದನೆಯಡಿಯಲ್ಲಿಪಿಕೆಎಲ್‌ಅನ್ನು ಭಾರತದ ಅತ್ಯಂತ ಯಶಸ್ವಿ ಕ್ರೀಡಾ ಲೀಗ್ಗಳಲ್ಲಿಒಂದಾಗಿ ನಿರ್ಮಿಸಿದೆ. ಪ್ರೊ ಕಬಡ್ಡಿ ಲೀಗ್‌ ಭಾರತದ ದೇಶೀಯ ಕ್ರೀಡೆಯಾದ ಕಬಡ್ಡಿ ಮತ್ತು ಅದರ ಕ್ರೀಡಾಪಟುಗಳ ಚಿತ್ರಣವನ್ನು ರಾಷ್ಟ್ರೀಯ ಮತ್ತು ವಿಶ್ವದಾದ್ಯಂತ ಪರಿವರ್ತಿಸಿದೆ. ಪಿಕೆಎಲ್‌ನಲ್ಲಿತಮ್ಮ ಅನೇಕ ಆಟಗಾರರ ಭಾಗವಹಿಸುವಿಕೆಯನ್ನು ನೋಡಿದ ನಂತರ, ಹಲವಾರು ಕಬಡ್ಡಿ ಆಡುವ ರಾಷ್ಟ್ರಗಳು ತಮ್ಮ ದೇಶೀಯ ಕಬಡ್ಡಿ ಕಾರ್ಯಕ್ರಮಗಳನ್ನು ಬಲಪಡಿಸಿವೆ.

Advertisement

ಪ್ರೊ ಕಬಡ್ಡಿ ಲೀಗ್‌ನ ಎಲ್ಲಾ ಲೈವ್‌ ಅಪ್‌ಡೇಟ್‌ಗಳಾಗಿಗಿ www.prokabaddi.com ಲಾಗಿನ್‌ ಆಗಿ, ಅಧಿಕೃತ ಪ್ರೊ ಕಬಡ್ಡಿ ಅಪ್ಲಿಕೇಶನ್‌ ಡೌನ್ಲೋಡ್‌ ಮಾಡಿ ಅಥವಾ ಇನ್‌ಸ್ಟಾಗ್ರಾಮ…, ಯೂಟ್ಯೂಬ್‌, ಫೇಸ್‌ಬುಕ್‌ ಮತ್ತು ಟ್ವಿಟರ್‌ನಲ್ಲಿ @prokabaddi ಫಾಲೋ ಮಾಡಿ.

ಪ್ರೊ ಕಬಡ್ಡಿ ಲೀಗ್‌ ಸೀಸನ್‌ 11ರ ಆಟಗಾರರ ಹರಾಜು ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿನೇರ ಪ್ರಸಾರವಾಗಲಿದೆ ಮತ್ತು ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗಲಿದೆ.

Advertisement

Also Read: Who is Divimara Nava wife of Francisco Oropesa San Jacinto County Texas mass shooter – The SportsGrail

Topics: